ಕನ್ನಡ ಚಲನಚಿತ್ರ ಕೇರ್ ಆಫ್ ಫುಟ್ ಪಾತ್ -೨ ಚಿತ್ರ:ಕೇರ್ ಆಫ್ ಫುಟ್ ಪಾತ್-೨ ಭಾಷೆ:ಕನ್ನಡ ನಿರ್ದೇಶನ: ಕಿಶನ್ ಶ್ರೀಕಾಂತ ನಿರ್ಮಾಣ:ದೇವರಾಜ್ ಪಾಂಡೆ ಸಂಗೀತ:ಮನೋಜ್ ಸಂತೋಷಿ ಛಾಯಾಗ್ರಹಣ:ಮಹೇಶ್ ಕೆ ದೇವ್ ಬಿಡುಗಡೆಯಾದ ದಿನಾಂಕ:೦೪-ಡಿಸೆಂಬರ್- ೨೦೧೫ ತಾರಾಗಣ:ಕಿಶನ್ ಶ್ರೀಕಾಂತ್, ಕಾರ್ತಿಕ್ ಜಯರಾಮ್, ಇಶಾ ಡಿಯೋಲ್, ಅವಿಕಾ ಗೋರ್, ಡಿಂಗ್ರಿ ನರೇಶ್ ಸಂಕ್ಷಿಪ್ತ ವಿವರಣೆ: ವಿಶ್ವದ ಅತ್ಯಂತ ಕಿರಿಯ ನಿರ್ದೇಶಕರು ಎಂದು ಗಿನ್ನಿಸ್ ದಾಖಲೆ ಬರೆದಿರುವ ಮಾಸ್ಟರ್ ಕಿಶನ್ ನಿರ್ದೇಶನದ ಕೇರ್ ಆಫ್ ಫುಟ್ ಪಾತ್ -೨ ಒಂದು ಕನ್ನಡದ ಅತ್ಯುತ್ತಮ ಚಿತ್ರವಾಗಿದ್ದು ಮಾಸ್ಟರ್ ಕಿಶನ್ ನಿರ್ದೇಶನದ ೩ನೇ ಚಿತ್ರವಗಿದೆ. ಕೇವಲ ೧೬ ವರ್ಷ ವಯಸ್ಸಿನ ಕಿಶನ್ ರವರು ತಮ್ಮ ಈ ಚಿತ್ರದ ಮೂಲಕ ಯುವಕರನ್ನು ಉದ್ದೇಶಿಸಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಕೇರ್ ಆಫ್ ಫುಟ್ ಪಾತ್ -೨ ಚಿತ್ರವು ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿ ದಾಖಲೆ ಬರೆದಿದೆ. ರಂಗಿತರಂಗ ಚಿತ್ರ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಕನ್ನಡದ ಇನ್ನೊಂದು ಚಲನಚಿತ್ರವಾಗಿದೆ. ಯುವಕರ ಮನಸ್ಸು ಹೇಗೆ ಪ್ರೀತಿ ಪ್ರಣಯ ಎಂದು ತಪ್ಪು ದಾರಿ ಹಿಡಿಯುತ್ತದೆ ಮತ್ತು ಯುವಕರ ನಿಜವಾದ ಜವಾಬ್ದಾರಿಗಳೇನು ಎಂಬುದನ್ನು ಏಳೆ ಏಳೆಯಾಗಿ ಬಿಂಬಿಸಲಾಗಿದೆ.